WHY US

Partner with us for Press release distribution and get best in class service, guaranteed postings on tier 1 media and maximum reach

ಯುಎಇ ಮೂಲದ ಜೆಮಿನಿ ಗ್ರೂಪ್‌ನ ಅಧ್ಯಕ್ಷ ಸುಧಾಕರ್‌ ರಾವ್‌ ಅವರು ತಾವು ಕಲಿತ ಶಿಕ್ಷಣ ಸಂಸ್ಥೆ – ಎನ್‌ಐಟಿ ವಾರಂಗಲ್‌ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ

  • Thursday, October 17, 2019 4:52PM IST (11:22AM GMT)
ಈ ನಿಧಿಯನ್ನು ಅತ್ಯಾಧುನಿಕ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಸ್ಥಾಪನೆಗೆ ಬಳಸಿಕೊಳ್ಳಲಾಗುತ್ತದೆ
 
Warangal, Telangana, India:  ಯುಎಇ ಮೂಲದ ಜೆಮಿನಿ ಗ್ರೂಪ್‌ನ ಸ್ಥಾಪಕ ಸುಧಾಕರ ರಾವ್‌, ತಾವು ಕಲಿತ ಶಿಕ್ಷಣ ಸಂಸ್ಥೆ ಎನ್‌ಐಟಿ ವಾರಂಗಲ್‌ಗೆ ಅತ್ಯಾಧುನಿಕ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಲು ಒಂದು ಕೋಟಿ ರೂಪಾಯಿ ದೇಣಿಗೆಯನ್ನು ಇಂದು ಘೋಷಿಸಿದ್ದಾರೆ.ಎನ್‌ಐಟಿಯ ವಜ್ರಮಹೋತ್ಸವ ಸಂದರ್ಭದಲ್ಲಿ ಗಣ್ಯರಾದ ಪ್ರೊ. ಕೆ.ಕೆ. ಅಗರವಾಲ್‌, ಅಧ್ಯಕ್ಷರು, ನ್ಯಾಶನಲ್‌ ಬೋರ್ಡ್ ಆಫ್ ಅಕ್ರಿಡಿಷನ್‌, ಪ್ರೊ. ಎನ್‌.ವಿ. ರಮಣರಾವ್‌, ನಿರ್ದೇಶಕರು, ಎನ್‌ಐಟಿ ವಾರಂಗಲ್‌ ಇವರ ಸಮ್ಮುಖದಲ್ಲಿ ಶ್ರೀ ರಾವ್ ಅವರ ಪರವಾಗಿ ಅವರ ತಾಯಿ ಗಂಗಾ ರಾಘವೇಂದ್ರ ರಾವ್‌ ಮತ್ತು ಸೋದರಿ ಸುಜಾತಾ ಶ್ರೀನಿವಾಸ ರಾವ್‌ ಅವರು ಚೆಕ್‌ ಹಸ್ತಾಂತರಿಸಿದರು.
 
ಶ್ರೀ ರಾವ್ ಅವರು ಈ ಸಂಸ್ಥೆಯ ಮಾಜಿ ವಿದ್ಯಾರ್ಥಿಯಾಗಿದ್ದು, 1977-82ರ ಬ್ಯಾಚ್‌ನ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು.ನಂತರ ಅವರು ಮಧ್ಯಪ್ರಾಚ್ಯದ ಅತಿದೊಡ್ಡ ಉದ್ಯಮ ಸಮೂಹಗಳ ಪೈಕಿ ಒಂದಾಗಿರುವ ಜೆಮಿನಿ ಗ್ರೂಪ್‌ ಸ್ಥಾಪಿಸಿದರು, ಈ ಸಂಸ್ಥೆ ರಿಯಲ್‌ ಎಸ್ಟೇಟ್‌, ಇಂಧನ ಮತ್ತು ವೆಲ್ತ್‌ ಮ್ಯಾನೇಜ್‌ಮೆಂಟ್‌ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಒಳ ಅರಿವು ಹೊಂದಿರುವ ಉದ್ಯಮಿ ಶ್ರೀ ರಾವ್‌ ಅವರು ಭಾರತ ಮತ್ತು ಮಧ್ಯಪ್ರಾಚ್ಯ ಎರಡೂ ದೇಶಗಳಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ದೊಡ್ಡ ಕಾರ್ಯಗಳಿಗೆ ನೆರವು ನೀಡುತ್ತಿದ್ದಾರೆ. 
 
ದೇಣಿಗೆ ಬಗ್ಗೆ ಮಾತನಾಡಿದ ಜೆಮಿನಿ ಗ್ರೂಪ್‌ ಸ್ಥಾಪಕ, ಸುಧಾಕರ ರಾವ್‌, “ನಾನು ಕಲಿತ ಶಿಕ್ಷಣ ಸಂಸ್ಥೆಯ ಭಾರೀ ಋಣವನ್ನು ತೀರಿಸಬೇಕು ಎನ್ನುವ ದೀರ್ಘ ಕಾಲದ ಬಯಕೆಯನ್ನು ನಾನು ಪೂರೈಸುತ್ತಿದ್ದೇನೆ.ಎನ್‌ಐಟಿ ವಾರಂಗಲ್‌ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ, ನಾನು ಇಲ್ಲಿಂದ ಕೇವಲ ಪ್ರತಿಷ್ಠಿತ ಪದವಿ ಪಡೆದಿರುವುದಷ್ಟೇ ಅಲ್ಲ, ಜೊತೆಗೆ ನನ್ನ ಕನಸುಗಳನ್ನು ಬೆನ್ನತ್ತಲು ಅಪಾರ ಆತ್ಮವಿಶ್ವಾಸವನ್ನೂ ಗಳಿಸಿಕೊಂಡೆ” ಎಂದು ಹೇಳಿದರು.
 
ಶ್ರೀ ರಾವ್ ಅವರ ದೇಣಿಗೆಯನ್ನು ಅತ್ಯಾಧುನಿಕ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆಗೆ ಬಳಸಿಕೊಳ್ಳಲಾಗುತ್ತದೆ.“ಈ ಹಾಲ್‌ ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಕನಸುಗಳಿಗೆ ಶಕ್ತಿ ತುಂಬುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ; ಉದ್ಯಮಶೀಲತೆಯ ಬೀಜವನ್ನು ಯುವ ಮನಸ್ಸಿನಲ್ಲಿ ಬಿತ್ತನೆ ಮಾಡಿ ಮತ್ತು ಅದಕ್ಕೆ ನೀರೆರೆದರೆ ರೋಮಾಂಚಕಾರಿ ಭವಿಷ್ಯ ಖಂಡಿತ” ಎಂದು ಶ್ರೀ ರಾವ್‌ ಅಭಿಪ್ರಾಯಪಟ್ಟರು.
 
ಜೆಮಿನಿ ಗ್ರೂಪ್‌ ಕುರಿತು

ಜೆಮಿನಿ ಪ್ರಾಪರ್ಟಿ ಡೆವಲಪರ್ಸ್ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 30 ವರ್ಷಗಳಿಗೂ ಹೆಚ್ಚಿನ ಯಶಸ್ವಿ ಉದ್ಯಮ ಅನುಭವದೊಂದಿಗೆ ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಪ್ರಖ್ಯಾತ ಉದ್ಯಮ ಸಮೂಹವಾಗಿದೆ, ಮತ್ತು ಅತ್ಯುತ್ತಮ ಗುಣಮಟ್ಟದ ಅತ್ಯಾಧುನಿಕ ಆದರೂ ಕೈಗೆಟುಕುವ ಐಷಾರಾಮಿ ಪ್ರಾಪರ್ಟಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಹೊಂದಿದೆ.
 
ಲೆಗಸಿ ಫಿನ್‌ವೆಸ್ಟ್‌ ಪ್ರೈ.ಲಿ. ಒಂದು ಬಾಟಿಕ್ ವೆಲ್ತ್‌ ಮ್ಯಾನೇಜ್‌ಮೆಂಟ್‌ ಕಂಪನಿಯಾಗಿದ್ದು, ಆಸ್ತಿ ಸಲಹೆ ಮತ್ತು ಫ್ಯಾಮಿಲಿ ಆಫೀಸ್‌ ಸೇವೆಗಳನ್ನು ಒದಗಿಸುತ್ತಿದೆ. ಈ ಸಂಸ್ಥೆ ಭಾರತದಾದ್ಯಂತ ಕಚೇರಿಗಳನ್ನು ಹೊಂದಿದೆ.
 
ಫೋಟೋಗಳು ಮಲ್ಟಿಮೀಡಿಯಾ ಗ್ಯಾಲರಿ ಲಭ್ಯವಿದೆ: https://www.businesswire.com/news/home/52110415/en
 
ಸಂಪರ್ಕ ವಿವರಗಳು:
ಪೂರ್ಣ ಹೆಸರು:ಅಜತ್‌ ಬಜಾಜ್‌
ದೂರವಾಣಿ:+ 910 99209 28757
ಇ-ಮೇಲ್‌: [email protected]


Submit your press release

Copyright © 2025 Business Wire India. All Rights Reserved.