ನಿಮ್ಮ ಮನೆ ಖರೀದಿ ಪ್ರಕ್ರಿಯೆಯನ್ನು ಇದು ಹೇಗೆ ಸುಲಭವಾಗಿಸುತ್ತದೆ ಎಂದು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
ವೈಯಕ್ತಿಕ ನೆರವಿನೊಂದಿಗೆ ದೇಶಾದ್ಯಂತ ಆಯ್ದ ಮನೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ
ನಿಮ್ಮ ಕುಟುಂಬಕ್ಕೆ ಸರಿಯಾದ ಮನೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಪ್ರಮುಖ ಸಂಗತಿ. ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೋಮ್ಸ್ ಮತ್ತು ಲೋನ್ಸ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಾಪರ್ಟಿಗಳನ್ನು ಪಟ್ಟಿಮಾಡಿದೆ. ನಿಮ್ಮ ನಗರವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ನಿರೀಕ್ಷಿತ ಸ್ಥಳದಲ್ಲಿ ಪ್ರಾಪರ್ಟಿ ಆಯ್ಕೆ ಮಾಡಿ. ಮ್ಯಾಪ್ ಬಳಸಿ ನಿಖರ ಪ್ರದೇಶದಲ್ಲಿ ಹುಡುಕಾಟ ನಡೆಸಿ ಮತ್ತು ಲಿಸ್ಟ್ ಮಾಡಿರುವ ಸ್ವತ್ತಿನ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಿ.
ಬಿಲ್ಡರ್ ಮತ್ತು ಪ್ರಾಪರ್ಟಿಯ ವಿವರಗಳನ್ನು ಈ ಪೋರ್ಟಲ್ ನಿಮಗೆ ನೀಡುತ್ತದೆ ಮತ್ತು ಸಮೀಪದ ಸ್ಥಳದ ಬಗ್ಗೆ ನಿಮಗೆ ವಿವರವನ್ನೂ ನೀಡತ್ತದೆ. ಶಾಲೆ, ಆಸ್ಪತ್ರೆ, ಬ್ಯಾಂಕ್, ಸೂಪರ್‌ಮಾರ್ಕೆಟ್ ಅಥವಾ ದೇವಸ್ಥಾನಗಳ ಮಾಹಿತಿ ನೀಡುತ್ತದೆ. ಜಿಮ್, ಕ್ಲಬ್ ಹೌಸ್, ಆಟದ ಪ್ರದೇಶ, ಈಜುಕೊಳ, 24 ಗಂಟೆ ಪವರ್ ಬ್ಯಾಕಪ್ ರೀತಿಯ ಮನೆಯೊಳಗಿನ ಸೌಲಭ್ಯವನ್ನೂ ನೋಡಬಹುದಾಗಿದ್ದು, ಪ್ರಾಪರ್ಟಿಯನ್ನು ಮೌಲೀಕರಿಸಬಹುದು. ನೀವು ಇಷ್ಟಪಡುವ ಪ್ರಾಪರ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಬಹುದು ಮತ್ತು ನಂತರ ಅವುಗಳನ್ನು ನೋಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಕೆಲವೇ ಕ್ಲಿಕ್‌ಗಳಲ್ಲಿ ನೀವು ಸೈಟ್ ವಿಸಿಟ್ ಅನ್ನೂ ವಿನಂತಿ ಮಾಡಬಹುದು. ಅಷ್ಟಕ್ಕೂ, ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಯಾವುದೇ ಶುಲ್ಕವಿಲ್ಲದೇ ಎಕ್ಸೆಕ್ಯೂಟಿವ್ ಕಳುಹಿಸುತ್ತದೆ. ಇದರಿಂದ ನೀವು ಪರಿಣಿತರೊಂದಿಗೆ ಪ್ರಾಪರ್ಟಿ ವಿಶ್ಲೇಷಣೆ ಮಾಡಬಹುದು.
ತ್ವರಿತವಾಗಿ 3 ಕೋಟಿ ರೂ. ಫಂಡಿಂಗ್ ಮೂಲಕ ಮನೆ ಖರೀದಿಸಿ
ಅಪಾರ್ಟ್‌ಮೆಂಟ್ ಕಾನ್ಫಿಗರೇಶನ್, ಅವುಗಳ ಮೆಲೆ ಮತ್ತು ಆರಂಭಿಕ ಇಎಂಐ ರೀತಿಯ ವಿವರಗಳನ್ನೂ ವೆಬ್‌ಸೈಟ್ ಒಳಗೊಂಡಿರುತ್ತದೆ. ಈ ಮೂಲಕ ನೀವು ಆರಂಭದಿಂದಲೇ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಬಹುದು.
ಹೋಮ್ ಲೋನ್ ಮೂಲಕ ನಿಮಗೆ 3 ಕೋಟಿ ರೂ.ವರೆಗೆ ಹಣಕಾಸು ನೆರವು ನೀಡುವುದರಿಂದ ಯಾವ ರಾಜಿ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ದೀರ್ಗ ಅವಧಿಗೆ ಮತ್ತು ಅನುಕೂಲಕರ ಬಡ್ಡಿ ದರದಲ್ಲಿ ಇದನ್ನು ನೀವು ಪಡೆಯಬಹುದು. ಹೆಚ್ಚುವರಿ ಸ್ಥಳಾವಕಾಶ, ಜಿಮ್ ಸದಸ್ಯತ್ವ ಅಥವಾ ಮನೆ ಸುಧಾರಣೆಗೆ ಹೆಚ್ಚುವರಿ ಹಣಕಾಸು ಅಗತ್ಯವಿದ್ದರೆ, ಇದಕ್ಕೆ ಟಾಪ್ ಅಪ್ ಲೋನ್ ಅನ್ನೂ ಪಡೆಯಬಹುದು. ಇನ್ನೂ ಮಹತ್ವದ ಸಂಗತಿಯೆಂದರೆ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಪೂರ್ವ ಪಾವತಿ ಮತ್ತು ಮುಂಗಡ ಮುಕ್ತಾಯವನ್ನು ಮಾಡಬಹುದು.
ಸಮಗ್ರ ದಾಖಲೆ ನೆರವಿನಿಂದ ಕನಸಿನ ಮನೆಗೆ ಪ್ರವೇಶಿಸಿ
ಇಡೀ ಪ್ರಕ್ರಿಯೆ ಕಿರಿಕಿರಿ ರಹಿತವಾಗಿದ್ದು, ದಾಖಲೆಗಳನ್ನು ನಿರ್ವಹಿಸಲು ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಕ್ಸೆಕ್ಯೂಟಿವ್ ನೆರವಾಗುತ್ತಾರೆ ಮತ್ತು ಖರೀದಿ ಪ್ರಕ್ರಿಯೆಯನ್ನು ಮುಗಿಸಲು ಸಹಾಯ ಮಾಡುತ್ತಾರೆ. ಹೋಮ್ಸ್ ಮತ್ತು ಲೋನ್ಸ್‌ನಿಂದ ಮನೆ ಖರೀದಿಯು ಕಿರಿಕಿರಿ ಮತ್ತು ಒತ್ತಡ ರಹಿತವಾಗಿರುತ್ತದೆ. 72 ಗಂಟೆಗಳ ಸಾಲ ಅನುಮತಿ ಪ್ರಕ್ರಿಯೆಯನ್ನು ಮಾಡುವ ಮೂಲಕ ನೀವು ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ನೀವು ಮಾಡಬೇಕಿರುವುದು ಇಷ್ಟೇ, ಪೂರ್ವ ಅನುಮೋದಿತ ಕೊಡುಗೆಯನ್ನು ನೋಡಿ ಮತ್ತು ಕಸ್ಟಮೈಸ್ಡ್ ಡೀಲ್ ಬಳಸಿ ಅಪ್ಲೈ ಮಾಡಿ.
ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಬಗ್ಗೆ
ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂಬುದು ಬಜಾಜ್ ಫೈನಾನ್ಸ್ ಲಿಮಿಟೆಡ್‌ನ 100% ಅಂಗಸಂಸ್ಥೆಯಾಗಿದೆ ಮತ್ತು ಇದು ದೇಶದ 21 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಗೃಹಬಳಕೆ, ವಾಣಿಜ್ಯ ಮತ್ತು ಎಸ್‌ಎಂಇ ಹಣಕಾಸು ವಿಭಾಗದಲ್ಲಿ 19 ಕ್ಕೂ ಹೆಚ್ಚು ಉತ್ಪನ್ನ ವೈಶಿಷ್ಟ ಹೊಂದಿರುವ ದೇಶದ ಅತ್ಯಂತ ವೈವಿಧ್ಯಮಯ ಎನ್‌ಬಿಎಫ್‌ಸಿ ಆಗಿದೆ. ಪುಣೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವ್ಯಕ್ತಿಗಳಿಗೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮನೆ, ಪ್ಲಾಟ್ ಅಥವಾ ವಾಣಿಜ್ಯ ಪ್ರದೇಶಗಳನ್ನು ಖರೀದಿಸಲು, ನಿರ್ಮಿಸಲು ಮತ್ತು ನವೀಕರಿಸಲು ನೆರವು ನೀಡುತ್ತದೆ. ವಹಿವಾಟು ಅಥವಾ ವೈಯಕ್ತಿಕ ಉದ್ದೇಶಕ್ಕೆ ಸ್ವತ್ತಿನ ಮೇಲೆ ಸಾಲವನ್ನೂ ಇದು ಒದಗಿಸುತ್ತದೆ ಹಾಗೂ ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಕಾರ್ಯನಿರ್ವಹಣೆ ಬಂಡವಾಳ ಒದಗಿಸುತ್ತದೆ. ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಬಿಲ್ಡರುಗಳು ಮತ್ತು ಡೆವಲಪರ್‌ಗಳಿಗೆ ಹಣಕಾಸನ್ನೂ ಇದು ಒದಗಿಸುತ್ತದೆ. ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಅತ್ಯಧಿಕ ಕ್ರಿಸಿಲ್ ಎಎಎ (ಸ್ಥಿರ) ರೇಟಿಂಗ್‌ನ ಹೆಮ್ಮೆಯನ್ನೂ ಹೊಂದಿದೆ.
ಇನ್ನಷ್ಟು ತಿಳಿಯಲು: https://www.bajajhousingfinance.in
